+91 85909 21101 info@ananthapuratemple.com

ಅನಂತಪುರ ದೇವಸ್ಥಾನ ಸಂದರ್ಶಿಸಿದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ

ಅನಂತಪುರ, 11-05-2025
ಉಡುಪಿ ಜಿಲ್ಲೆಯ ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಗುರುರಾಜ್ ಗಂಟಿಹೊಳೆ ಅವರು ಇಂದು ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದರು. ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಮಹಾಲಿಂಗೇಶ್ವರ ಭಟ್ ಅವರು ಶಾಸಕರನ್ನು ಸ್ವಾಗತಿಸಿದರು. ಶ್ರೀ ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಕುರಿತು ವಿವರವಾಗಿ ತಿಳಿದುಕೊಂಡ ಶಾಸಕರು ಕ್ಷೇತ್ರದ ಇತಿಹಾಸ, ವಿಶೇಷತೆ ತಿಳಿದು ಸಂತಸಪಟ್ಟರು. ಕ್ಷೇತ್ರದ ಸಮೀಪದ ಸಣ್ಣ ಸರೋವರದಲ್ಲಿ ವಿಹರಿಸುತ್ತಿದ್ದ ದೈವೀಕ ಮೊಸಳೆ ಬಬಿಯಾ ದರ್ಶನ ಪಡೆದ ಶಾಸಕರು ಮತ್ತು ತಂಡದವರು ಕ್ಷೇತ್ರ ದರ್ಶನದಿಂದ ನಾವೆಲ್ಲರೂ ಪುನೀತರಾದೆವು ಎಂದು ಅಭಿಪ್ರಾಯ ಹಂಚಿಕೊಂಡರು.
ಈ ಸಂದರ್ಭದಲ್ಲಿ ವಿಕಾಸ ಟ್ರಸ್ಟ್ ಅಧ್ಯಕ್ಷರಾದ ರವಿನಾರಾಯಣ ಗುಣಾಜೆ, ಉದ್ಯಮಿ ಅವಿನಾಶ್ ಮುಂತಾದವರು ಉಪಸ್ಥಿತರಿದ್ದರು.