ಅನಂತಪುರ, 30-06-2016:
ಯುವಾ ಬ್ರಿಗೇಡ್ ಕಾಸರಗೋಡು ವತಿಯಿಂದ ಸ್ವಾತಂತ್ರ್ಯವೀರ ವಿನಾಯಕ ದಾಮೋದರ ಸಾವರ್ಕರ್ ರವರ 133ನೇ ಹಾಗೂ ನಮ್ಮ ದೇಶ ಕಂಡ ಶ್ರೇಷ್ಠ ಸಮಾಜ ಸುಧಾರಕ ಬಾಬು ಜಗಜೀವನ್ ರಾಮ್ ರವರ 108ನೇ ಜಯಂತಿ ಪ್ರಯುಕ್ತ “ಹೃದಯ ಮಂದಿರ” ಕಾರ್ಯಕ್ರಮದ ಅಂಗವಾಗಿ ಸರೋವರ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿರುವ ಶ್ರೀ ಅನಂತಪುರ ಕ್ಷೇತ್ರ ಪರಿಸರವನ್ನು ರಾಜ್ಯ ಸಂಚಾಲಕರಾದ ನಿತ್ಯಾನಂದ ವಿವೇಕವಂಶಿಯವರ ನೇತೃತ್ವದಲ್ಲಿ ಸ್ವಛ್ಚಗೊಳಿಸಲಾಯಿತು.
ಈ ಸಂದರ್ಭದಲ್ಲಿ ಕ್ಷೇತ್ರದ ಪದಾಧಿಕಾರಿಗಳು ಜೊತೆಗಿದ್ದು ಮಾರ್ಗದರ್ಶನ ಮಾಡಿದರು.